” ಸಂಭ್ರಮ ಶನಿವಾರ” ಜುಲೈ ತಿಂಗಳ ಚಟುವಟಿಕೆ : ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ.

WhatsApp Group Join Now
Telegram Group Join Now

ಈ ಮಾಡ್ಯುಲ್ ಗಳನ್ನು 3 ಘಟಕಗಳಾಗಿ ವಿಂಗಡಿಸಿದೆ.

೧. ಅರಿವು ೨.ಅನುಭವ ೩.ಅವಲೋಕನ/ ಪ್ರತಿಫಲನ

  • ಎಲ್ಲಾ ಮಕ್ಕಳು ಆಯಾ ಹಂತಗಳಿಗೆ ನೀಡಿರುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಖಾತ್ರಿಪಡಿಸಿಕೊಳ್ಳುವುದು.
  • ಚಟುವಟಿಕೆಗಳಲ್ಲಿ ಯಾವ ವಿದ್ಯಾರ್ಥಿಯು ಹೊರಗುಳಿಯದಂತೆ ಅಥವಾ ಒಂದೇ ವಿದ್ಯಾರ್ಥಿ ಪುನರಾವರ್ತನೆ ಆಗದಂತೆ ಪ್ರತಿ ಬಾರಿ ವಿವಿಧ ವಿದ್ಯಾರ್ಥಿಗಳು ಚಟುವಟಿಕೆಗಳ ನೇತೃತ್ವ ವಹಿಸುವುದನ್ನು ಖಾತ್ರಿಪಡಿಸುವುದು.
  • ಮಕ್ಕಳು ಚಟುವಟಿಕೆ ಕೈಗೊಳ್ಳುವಾಗ ಪೂರ್ಣ ಸ್ವಾತಂತ್ರ್ಯ ನೀಡುವುದು ಅವಶ್ಯಕತೆ ಇದ್ದಾಗ ಮಾತ್ರ ಶಿಕ್ಷಕರು ಮಾರ್ಗದರ್ಶನ ನೀಡುವುದು.
  • ನಿರೂಪಿಸುವ ವಿದ್ಯಾರ್ಥಿಗಳು ಅಪೇಕ್ಷಿಸಿದರೆ ಮಾತ್ರ ಮಾರ್ಗದರ್ಶನ ನೀಡುವುದು ಇಲ್ಲದಿದ್ದರೆ ಮಧ್ಯಪ್ರವೇಶಿಸುವಂತಿಲ್ಲ.
  • ವಿದ್ಯಾರ್ಥಿ ನಾಯಕ ನಿರೂಪಕರು ಚರ್ಚೆಗಳ ಸಾರಾಂಶ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲು ಶಿಕ್ಷಕರು ಅವರಿಗೆ ಮಾರ್ಗದರ್ಶನ ನೀಡುವುದು.
  • ಶಾಲೆ ಹಾಗೂ ತರಗತಿಯಲ್ಲಿ ಚರ್ಚೆ ಹಾಗೂ ಕ್ರೀಡಾ ಪ್ರದರ್ಶನಗಳಿಗೆ ಪ್ರತ್ಯೇಕ ಸ್ಥಳ ಗುರ್ತಿಸಿ ಅವಕಾಶ ಒದಗಿಸುವುದು.
  • ಚಟುವಟಿಕೆ ನಿರ್ವಹಿಸುವ ಮುನ್ನ ಅಗತ್ಯ ಲೇಖನ ಸಾಮಗ್ರಿ ಹಾಗೂ ಇತರೆ ವಸ್ತುಗಳು ಲಭ್ಯವಾಗಿವೆ ಎಂದು ಖಾತ್ರಿಪಡಿಸುವುದು.
  • ಗುಂಪು ಮಾಡುವಾಗ ಬಾಲಕ ಹಾಗೂ ಬಾಲಕಿಯರಿಗೆ ಸಮಾನ ಅವಕಾಶ ಒದಗಿಸುವುದು.
  • ಬ್ಯಾಗ್ರಹಿತ ಜನ ದಿನದ ಉದ್ದೇಶದಂತೆ ಮಕ್ಕಳಲ್ಲಿ ಉತ್ಸಾಹ ಕಡಿಮೆಯಾಗದಂತೆ ಅರ್ಥಪೂರ್ಣವಾಗಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುವುದು.

.

ಚಟುವಟಿಕೆ 1: ಅರಿವು

ಮಕ್ಕಳಿಗೆ 5-6 ಗುಂಪುಗಳಾಗಿ ವಿಂಗಡಿಸಿ ಫ್ಲಾಶ್ ಕಾರ್ಡ್ ತೋರಿಸಿ ವಯಸ್ಕರ ಅನುಮತಿ ಇಲ್ಲದೆ ಈ ವಸ್ತುಗಳನ್ನು ಬಳಸಬಹುದೇ ಎಂದು ಕೇಳಬೇಕು. ಈ ಪಟ್ಟಿಗೆ ಹೆಚ್ಚಿನ ವಸ್ತುಗಳನ್ನು ಸೇರಿಸಬಹುದು. ಈ ವಸ್ತುಗಳನ್ನು ಹಿರಿಯರ ಅನುಮತಿ ಇಲ್ಲದೆ ಯಾಕೆ ಬಳಸಬಾರದು ? ಎಂದು 20 ನಿಮಿಷ ಚರ್ಚೆ ಮಾಡಲು ಅವಕಾಶ ನೀಡಬೇಕು.

1000798498

ಚಟುವಟಿಕೆ 2 : ಅನುಭವ

ಫ್ಲಾಷ್ ಕಾರ್ಡ್ ತೋರಿಸಿ ಅಲ್ಲಿ ನೀಡಲಾದ ಪ್ರಶ್ನೆಗಳನ್ನು ನಿರೂಪಕ ವಿದ್ಯಾರ್ಥಿಗಳು ಕೇಳಬೇಕು.

  • ಕೊಟ್ಟಿರುವ ವಸ್ತು ಯಾವುದು?
  • ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವೇ?
  • ನಿಮ್ಮ ಕುಟುಂಬ ಅಥವಾ ನೆರೆಹೊರೆಯವರು ಇಂತಹ ವಸ್ತುಗಳನ್ನು ಬಳಸುವುದನ್ನು ನೋಡಿದ್ದೀರಾ?
  • ಯಾರಾದ್ರೂ ಇಂತಹ ವಸ್ತುಗಳನ್ನು ಬಳಸಿದಾಗ ಉಂಟಾದ ಪರಿಣಾಮ ಏನು?
  • ಈ ಉತ್ಪನ್ನಗಳನ್ನು ಬಳಸುವುದು ಸರಿಯೇ?
  • ಇವುಗಳನ್ನು ಬಳಸುವುದರಿಂದ ಉಂಟಾಗುವ ಪರಿಣಾಮಗಳೇನು

ಕೊಟ್ಟಿರುವ ವಸ್ತುಗಳನ್ನು ಬಳಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಚರ್ಚಿಸುವುದು.

1000798531 2
1000798592 3

ಚಟುವಟಿಕೆ : 3 ಅವಲೋಕನ

ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಗುಂಪಿನಲ್ಲಿ ಚಿತ್ರಗಳನ್ನು ರಚಿಸಲು ತಿಳಿಸುವುದು. ಹಾಗೂ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುವುದು.

1000798593

ಚಡುವಟಿಕೆ : 1 ಅರಿವು

ವಿದ್ಯಾರ್ಥಿಗಳನ್ನು 4-5 ಗುಂಪುಗಳನ್ನಾಗಿ ಮಾಡಿ ಫ್ಲಾಷ್ ಕಾರ್ಡ್ ನಲ್ಲಿ ನೀಡಿದ ಚಟುವಟಿಕೆ ಪೂರ್ಣಗೊಳಿಸುವುದು.

1000798599 1

ಚಟುವಟಿಕೆ 2: ಅನುಭವ

ಶಾಲೆಯ ಸುತ್ತ ಮುತ್ತ ಇರುವ ವಿಷಕಾರಿ ಹಾಗೂ ವಿಷಕಾರಿಯಲ್ಲದ ವಸ್ತುಗಳನ್ನು ಸಂಗ್ರಹಿಸುವುದು. ಏಕೆ ವಿಷಕಾರಿ? ಎಂಬುವುದನ್ನು ಚರ್ಚಿಸುವುದು.

1000798600 1

ಚಟುವಟಿಕೆ : 3 ಅವಲೋಕನ

ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಘೋಷಣೆ ರಚಿಸುವುದು.

1000798620 1

ಚಟುವಟಿಕೆ : 1 ಅರಿವು

ಫ್ಲಾಷ್ ಕಾರ್ಡ್ ನಲ್ಲಿ ನೀಡಿದಂತೆ ಚಟುವಟಿಕೆ ಪೂರ್ಣಗೊಳಿಸುವುದು.

ಚಟುವಟಿಕೆ 2 : ಅನುಭವ

ನೀಡಿದ ಕಥೆಯನ್ನು ಪೂರ್ಣಗೊಳಿಸುವುದು.

1000798646 3

ಚಟುವಟಿಕೆ 3: ಅವಲೋಕನ

ಬೀದಿ ನಾಟಕ, ಕವಿತೆ, ಹಾಡು, ಪೋಸ್ಟರ್ ರಚನೆ ಮೊದಲಾದ ಚಟುವಟಿಕೆ ನಡೆಸುವುದು.

1000798647 1

ಪ್ರತಿಜ್ಞೆ

1000798742
WhatsApp Group Join Now
Telegram Group Join Now
Sharing Is Caring:

Leave a Comment