ಸರಕಾರಿ ಶಾಲೆ, ಪಿಯು ಕಾಲೇಜುಗಳಿಗೆ ಉಚಿತ ವಿದ್ಯುತ್

WhatsApp Group Join Now
Telegram Group Join Now

2024 25 ನೇ ಸಾಲಿನಲ್ಲಿ ಈಗಾಗಲೇ ಮೂರು ತಿಂಗಳು ಗತಿಸಿರುವುದರಿಂದ ಹಾಗೂ ಜುಲೈನಲ್ಲಿ ಕೆಲವು ಸ್ಥಾವರಗಳ ವಿದ್ಯುತ್ ಬಳಕೆಯ ಬಿಲ್ ಗಳನ್ನು ನೀಡಿರುವ ಹಿನ್ನೆಲೆಯಲ್ಲಿ, ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ಯಡಿ 2024 – 25 ನೇ ಸಾಲಿನಲ್ಲಿ ವಿದ್ಯುತ್ ಬಳಕೆ ಮೊತ್ತವನ್ನು ನಮೂದಿಸಿ ಶೂನ್ಯ ಬಿಲ್ ನೀಡುವಂತೆ ಇಂಧನ ಇಲಾಖೆ ಎಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆ ಬಿಲ್ ಗಳ ಮೊತ್ತವನ್ನು ತ್ರೈಮಾಸಿಕವಾರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ನೀಡಿ ಮರುಪಾವತಿ ಪಡೆಯುವಂತೆ ನಿರ್ದೇಶನ ನೀಡಿದೆ.
1 ಆಗಸ್ಟ್ 2024 ರಿಂದ ಜಾರಿಗೆ ಬರುವಂತೆ ಸರ್ಕಾರಿ ಶಾಲೆ ಪಿಯು ಕಾಲೇಜ್ ಗಳ ವಿದ್ಯುತ್ ಬಳಕೆ ಬಿಲ್ ಗಳನ್ನು ತಂತ್ರಾಂಶದಲ್ಲಿ ಸೂಕ್ತವಾಗಿ ಅಳವಡಿಸಿ ಶೂನ್ಯ ಬಿಲ್ ನೀಡಬೇಕು. ಏಪ್ರಿಲ್ 1, 2024 ರಿಂದ ಜೂನ್ 31, 2024 ತ್ರೈಮಾಸಿಕವಾರು ಸರ್ಕಾರಿ ಶಾಲೆ ಪಿಯು ಕಾಲೇಜ್ಗಳ ವಿದ್ಯುತ್ ಬೇಡಿಕೆಯನ್ನು ಆಯಾ ಇಲಾಖೆ ಆಯುಕ್ತರಿಗೆ ನೀಡಿ ಪಾವತಿ ಪಡೆಯಬೇಕು. ಬಿಲ್ ವಿತರಿಸಿರುವ ಪ್ರಕರಣಗಳಲ್ಲಿ ಬೇಡಿಕೆ ಮೊತ್ತದ ಮೇಲೆ ಆಕರಣೆಯಾಗಿರುವ ಬಡ್ಡಿ ಮೊತ್ತವನ್ನು ಲೆಕ್ಕಪತ್ರಗಳಿಂದ ತೊಡೆದು ಹಾಕಲು ಕ್ರಮವಹಿಸಬೇಕು. ಮಾರ್ಚ್ 31.2024ರ ವರೆಗಿನ ವಿದ್ಯುತ್ ಬಾಕಿ ಮತ್ತು ಆಕರಣೆಯಾಗಿರುವ ಬಡ್ಡಿ ಮೊತ್ತವನ್ನು ಸಂಬಂಧಿಸಿದ ಶಾಲೆ ಹಾಗೂ ಕಾಲೇಜುಗಳಿಂದ ವಸೂಲಿ ಮಾಡಬೇಕು ಎಂದು ಇಂಧನ ಇಲಾಖೆಯ ಅಪಾರ ಕಾರ್ಯದರ್ಶಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Sharing Is Caring:

Leave a Comment