ಇನ್ಫ್ಲುಯೆನ್ಸಾ ಉಸಿರಾಟದ ಕಾಯಿಲೆಗಳ ಬಗ್ಗೆ ಸಾರ್ವಜನಿಕರಿಗೆ ಸಲಹೆಗಳು

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ವರದಿಯಂತೆ ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ
ಕಾಯಿಲೆಯ ಉಲ್ಬಣ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಸರಿಯಷ್ಟೇ ಸದರಿ ಪ್ರಕರಣಗಳ ಕುರಿತು WHO
ಹೇಳಿಕೆಯನ್ನು ಗಮನಿಸಿದರೆ, ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ಈ ಹೆಚ್ಚಳಕ್ಕೆ ಇನ್ಪ್ಯೂಯೆನ್ಜ ಮೈಕೋ ಪ್ಲಾಸ್ಮಾ, ನ್ಯುಮೋನಿಯಾ, SARS ನಂತಹ ಸಾಮಾನ್ಯ ಸೂಕ್ಷ್ಮಾಣು ಜೀವಿಗಳು ಕಾರಣವೇ ಹೊರತು Cov-2 ನಂತಹ ಇತರ ಯಾವುದೇ ಅಸಾಮಾನ್ಯ ರೋಗಕಾರಕದಿಂದಲ್ಲ ಎಂಬುದು ಖಚಿತವಾಗಿದೆ.

image 51

ಸದರಿ ಸೀಸನಲ್ ಜ್ವರವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಜ್ವರ ಹೊಂದಿರುವ ವ್ಯಕ್ತಿಯ ಕೆಮ್ಮು ಅಥವಾ
ಸೀನುವಿಕೆಯ ಮೂಲಕ ಅಥವಾ ಹನಿಗಳ ಸಂಪರ್ಕದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ.

image 49

ಇದೊಂದು ಸ್ವಯಂ-ಸೀಮಿತ ರೋಗವಾಗಿದ್ದು, 5-7 ದಿನಗಳವರೆಗೆ ಇರುತ್ತದೆ. ರೋಗ ಮತ್ತು ಮರಣದ
ಪ್ರಮಾಣ ಕಡಿಮೆ ಇರುತ್ತದೆ. ಶಿಶುಗಳು, ವಯಸ್ಸಾದವರು, ಗರ್ಭಿಣಿಯರು, ಇಮ್ಯುನೊಕೊಂಪ್ರೊ ಮ್ಮೆಸ್ಕ್
ಮತ್ತು ದೀರ್ಘಕಾಲೀನ ಔಷಧಿಗಳನ್ನು, ವಿಶೇಷವಾಗಿ ಸ್ಟಿರಾಯ್ಡಗಳನ್ನು ತೆಗೆದುಕೊಳ್ಳುವವರು ಅಪಾಯದ
ಗುಂಪಿಗೆ ಸೇರಿದವರಾಗುತ್ತಾರೆ ಹಾಗೂ ಇಂತಹ ಪ್ರಕರಣಗಳನ್ನು ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡುವ
ಅಗತ್ಯವಿರುತ್ತದೆ.

image 52

ಜ್ವರ, ಶೀತ, ಅಸ್ವಸ್ವ ತೆ, ಹಸಿವಿನ ಕೊರತೆ, ಮೈಯಾಲ್ಕಿಯಾ, ವಾಕರಿಕೆ, ಸೀನುವಿಕೆ ಮತ್ತು ಒಣ ಕೆಮ್ಮು
ಹಠಾತ್ ಅಸ್ವಸ್ಥತೆ ಇತ್ಯಾದಿ ಈ ರೋಗದ ಸಾಮಾನ್ಯ ಲಕ್ಷಣಗಳಾಗಿದ್ದು, ಹಲವಾರು ದಿನಗಳವರೆಗೆ ಇರುತ್ತದೆ.
ಇದು ಹೆಚ್ಚಿನ ಅಪಾಯದ ಗುಂಪಿನ ಜನರಲ್ಲಿ 3 ವಾರಗಳವರೆಗೂ ಇರುತ್ತದೆ.

ಈ ನಿಟ್ಟಿನಲ್ಲಿ
ಇನ್ಫ್ಲುಯೆನ್ಸ ಮತ್ತು ಇತರ ಉಸಿರಾಟದ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು
ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಈ ಕೆಳಕಂಡ ಸಲಹೆಗಳನ್ನು ನೀಡಲಾಗಿದೆ.

ಮಾಡಬೇಕಾದ ಮತ್ತು ಮಾಡಬಾರದ ಚಟುವಟಿಕೆಗಳು:

image 50
  • ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಅಂಗಾಂಶದಿಂದ
    ಮುಚ್ಚಿಕೊಳ್ಳಬೇಕು.
  • ಸಾಬೂನು ಮತ್ತು ನೀರಿನಿಂದ ಕೈಗಳನ್ನು ಆಗಾಗ್ಗೆ ತೊಳೆಯಬೇಕು.
  • ಅನಗತ್ಯವಾಗಿ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಬಾರದು.
  • ಹೆಚ್ಚು ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ ಮತ್ತು ಅಂತಹ ಸ್ಥಳಗಳಿಗೆ ಭೇಟಿ
    ನೀಡಿದರೆ ಫೇಸ್ ಮಾಸ್ಕ್ ಬಳಸಿ.
  • ಪ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳಿ.
  • ಸಮರ್ಪಕವಾಗಿ ನಿದ್ದೆ ಮಾಡಿ, ದೈಹಿಕವಾಗಿ ಕ್ರಿಯಾಶೀಲರಾಗಿರಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ
    ನಿಭಾಯಿಸಿ
  • ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ
  • ಸಾರ್ವಜನಿಕವಾಗಿ ಉಗುಳುವುದನ್ನು ತಪ್ಪಿಸಿ
  • ಹೆಚ್ಚು ಇನ್ಫ್ಲುಯೆನ್ಸ ಮತ್ತು ಇತರ ಉಸಿರಾಟದ ಕಾಯಿಲೆಗಳು, ಪ್ರಕರಣಗಳಿರುವ ಸ್ಥಳಗಳಿಗೆ
    ಪ್ರಯಾಣವನ್ನು ತಪ್ಪಿಸಿ
image 48

ನಿಮಗೆ ಇನ್ನು ಇನ್ಪ್ಲೂಯೆಂಜಾ ಇದೆ ಎಂದು ನೀವು ಭಾವಿಸಿದರೆ;

  • ಇನ್ಫ್ಲುಯೆನ್ಸ ಲೈಕ್ ಇಲ್ನೆಸ್ ILI ಸಂಭವಿಸಿದಲ್ಲಿ ಹತ್ತಿರದ ಸರ್ಕಾರಿ ಹೆಲ್ತ್ ಕೇರ್ ಸೆಂಟರ್ ಗೆ ಭೇಟಿ
    ನೀಡಿ
  • ಮನೆಯಲ್ಲೇ ಇರಿ, ಪ್ರಯಾಣ ಮಾಡಬೇಡಿ ಅಥವಾ ಕೆಲಸ ಕ್ಕೆ ಶಾಲೆಗೆ ಹೋಗಬೇಡಿ
  • ರಕ್ಷಣೆಗಾಗಿ ಫೇಸ್ ಮಾಸ್ಕ್ ಬಳಸಿ
  • ರೋಗಲಕ್ಷಣಗಳು ಪ್ರಾರಂಭವಾದ ನಂತರ ಕನಿಷ್ಠ 7 ದಿನಗಳವರೆಗೆ ಅಥವಾ 24 ಗಂಟೆಗಳವರೆಗೆ
    ರೋಗಲಕ್ಷಣಗಳಿಲ್ಲದಿರುವವರೆಗೆ ಇತರರೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಿ
  • ರೋಗಲಕ್ಷಣಗಳು ಉಲ್ಬಣಗೊಂಡರೆ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ
  • ಹೆಚ್ಚಿನ ಅಪಾಯದ ಗುಂಪಿನ ಜನರು 3 ವಾರಗಳವರೆಗೆ ರೋಗಲಕ್ಷಣಗಳನ್ನು ಅನುಭವಿಸಬಹುದು.
  • ವೈದ್ಯರನ್ನು ಸಂಪರ್ಕಿಸದೆ ಸ್ವಯಂ-ಔಷಧಿ ಮಾಡಬೇಡಿ ಅಥವಾ ಔಷಧಿಗಳು / ಆಂಟಿಬಯೋಟಿಕ್
    ತೆಗೆದುಕೊಳ್ಳಬೇಡಿ ಮತ್ತು ವೈದ್ಯಕೀಯ ಸಲಹೆಯನ್ನು ಸರಿಯಾಗಿ ಅನುಸರಿಸಿ
    ಸೀಸನಲ್ ಜ್ವರದ ಕುರಿತಾದ IDSP-NCDC ಸಲಹೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಡಾಕ್ಯುಮೆಂಟ್‌ಗೆ
    ಲಗತ್ತಿಸಲಾಗಿದೆ.
Screenshot 2023 12 02 14 45 36 67 7352322957d4404136654ef4adb64504 1
WhatsApp Group Join Now
Telegram Group Join Now
Sharing Is Caring:

Leave a Comment