ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ
ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀಮತಿ ಚಿತ್ರಾ
ಸ.ಹಿ.ಪ್ರಾ.ಶಾಲೆ ಇಂದಬೆಟ್ಟು
ಬೆಳ್ತಂಗಡಿ ತಾಲೂಕು
ಇವರು ಪ್ರಾಥಮಿಕ ಶಿಕ್ಷಣವನ್ನು ಕೆ ಆರ್ ಈ ಸಿ ಹೈಯರ್ ಪ್ರೈಮರಿ ಶಾಲೆ ಸುರತ್ಕಲ್ ಪ್ರೌಢ ಶಿಕ್ಷಣವನ್ನು ಹಿಂದೂ ವಿದ್ಯಾದಾಯಿನಿ ಪ್ರೌಢ ಶಾಲೆ ಸುರತ್ಕಲ್ ಪದವಿಪೂರ್ವ ಶಿಕ್ಷಣವನ್ನು ಗೋವಿಂದ ದಾಸ್ ಕಾಲೇಜು ಸುರತ್ಕಲ್ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಹೆಣ್ಮಕ್ಕಳ ಶಾಲೆ ಬಲ್ಮಠ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 01.12.2003 ರಲ್ಲಿ ಸ.ಹಿ.ಪ್ರಾ.ಶಾಲೆ ಪೆರಾಬೆ ಪುತ್ತೂರು ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 13.06.1013 ರಂದು ಸ.ಮಾ.ಹಿ.ಪ್ರಾ.ಶಾಲೆ ಮೂಡುಶೆಡ್ಡೆ ಮಂಗಳೂರು ಉತ್ತರ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಹೆಚ್ಚುವರಿಯಾಗಿ ದಿನಾಂಕ 11.08.2016 ರಂದು ಸ.ಹಿ.ಪ್ರಾ.ಶಾಲೆ ಇಂದಬೆಟ್ಟು ಬಂಗಾಡಿ ವಲಯ ಬೆಳ್ತಂಗಡಿ ತಾಲೂಕು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಪದ್ಮಾವತಿ ಎನ್
ಸ.ಉ.ಪ್ರಾ.ಶಾಲೆ ಪೆರೋಡಿತ್ತಾಯಕಟ್ಟೆ
ಬೆಳ್ತಂಗಡಿ ತಾಲೂಕು
ಶ್ರೀ ನಾರಾಯಣ ಮಾಸ್ತರ್ ಹಾಗೂ ಶ್ರೀಮತಿ ಕಮಾಲಾಕ್ಷಿ ದಂಪತಿಗಳ ಪುತ್ರಿಯಾಗಿ ದಿನಾಂಕ 12.11.1963 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕಲ್ಲಡ್ಕ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶ್ರೀ ಶಾರದಾ ಪ್ರೌಢ ಶಾಲೆ ಪಾಣೆಮಂಗಳೂರು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಬಲ್ಮಠ ಮಂಗಳೂರು ಇಲ್ಲಿ ಪೂರೈಸಿ, ದಿನಾಂಕ 28.11.1988 ರಲ್ಲಿ ಸ.ಹಿ.ಪ್ರಾ.ಶಾಲೆ ಬಡಗ ಕಜೆಕಾರು ಬಂಟ್ವಾಳ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ನಂತರ ಕೇಡರ್ ಮುಖ್ಯ ಶಿಕ್ಷಕಿಯಾಗಿ ದಿನಾಂಕ 12.04.2012 ರಲ್ಲಿ ಸ.ಉ.ಹಿ.ಪ್ರಾ.ಶಾಲೆ ಪರೋಡಿತ್ತಾಯಕಟ್ಟೆ ಇಲ್ಲಿ ಸೇವೆಗೆ ಸೇರಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ವಿಶಾಲಾಕ್ಷಿ
ಸ.ಹಿ.ಪ್ರಾ.ಶಾಲೆ ಸುಜೀರು
ಬಂಟ್ವಾಳ ತಾಲೂಕು
ಶ್ರೀ.ಜೆ.ತ್ಯಾಂಪ ಹಾಗೂ ಶ್ರೀಮತಿ ರಮಣಿ ದಂಪತಿಗಳ ಪುತ್ರಿಯಾಗಿ ದಿನಾಂಕ 04.11.1963 ರಲ್ಲಿ ಸೂಟರ್ ಪೇಟೆಯಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಗೋರಿಗುಡ್ಡೆ ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸಂತ ಜೆರೋಸಾ ಶಾಲೆಯಲ್ಲಿ ಪೂರೈಸಿ, ಶಿಕ್ಷಕ ತರಬೇತಿಯನ್ನು ಸರಕಾರಿ ಹೆಣ್ಣು ಮಕ್ಕಳ ತರಬೇತಿ ಸಂಸ್ಥೆ ಬಲ್ಮಠ ಇಲ್ಲಿ ಪೂರೈಸಿದ ಇವರು ದಿನಾಂಕ 26.10.1998 ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಅತ್ತಾವರ ಇಲ್ಲಿ ಸೇವೆಗೆ ಸೇರಿದ ಇವರು ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಣ್ಣೂರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಲ್ಲಡ್ಕ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ದಿನಾಂಕ 20.02.2020 ರಂದು ಮಲ್ಲಡ್ಕ ಶಾಲೆಯಿಂದ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸುಜೀರು ಇಲ್ಲಿ ಸೇವೆಗೆ ಸೇರಿ ಶಾಲೆಯ ಅಡುಗೆ ಕೋಣೆಯನ್ನು ಮುತ್ತೂಟ್ ಫೈನಾನ್ಸ್ ರವರ ಸಹಕಾರದೊಂದಿಗೆ ಸುಸಜ್ಜಿತವಾಗಿ ಸಜ್ಜುಗೊಳಿಸಿದ ಇವರು ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಸುಮಾರು 500 ಪುಸ್ತಕಗಳನ್ನು ಕೇಳಿ ಪಡೆದು ಶಾಲಾ ಗ್ರಂಥಾಲಯಕ್ಕೆ ಕೊಟ್ಟಿರುವ ಇವರು ಶಾಲೆಗೆ ಅಗತ್ಯವಾದ ಪ್ರಿಂಟರನ್ನು ವೈಯಕ್ತಿಕವಾಗಿ ಶಾಲೆಗೆ ಕೊಡುಗೆ ನೀಡಿದ ಇವರು ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ನಾಗರತ್ನ ಶಾಸ್ತ್ರಿ
ಸ.ಹಿ.ಪ್ರಾ.ಶಾಲೆ ಕಾಪಿಕಾಡ್
ಮಂಗಳೂರು ಉತ್ತರ
ದಿನಾಂಕ 07.03.1990 ರಲ್ಲಿ ಸೇವೆಗೆ ಸೇರಿದ ಇವರು ನಿರ್ಪಾಜೆ ಶಾಲೆ ಬಂಟ್ವಾಳ, ಮಧ್ಯ ಪರಪಾದೆ ಮಂಗಳೂರು ಉತ್ತರ ಹಾಗೂ ಗಂಡಿಬಾಗಿಲು ಪುತ್ತೂರು ತಾಲೂಕು ಹಾಗೂ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಾಪಿಕಾಡ್ ಮಂಗಳೂರು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಲೀನಾ ಮೊಂತೆರೋ
ಸ ಹಿ ಪ್ರಾ ಶಾಲೆ ಅಮ್ಮೆಂಬಳ
ಮಂಗಳೂರು ದಕ್ಷಿಣ
ಇವರು ತಮ್ಮ ಸುದೀರ್ಘ ವೃತ್ತಿ ಜೀವನದಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರೀಟಾ ಡಿಸೋಜಾ
ಸ.ಕಿ.ಪ್ರಾ.ಶಾಲೆ ಮಂಗೆಬೆಟ್ಟು.
ಮೂಡುಬಿದಿರೆ
ಶ್ರೀ ಸಾವೆರ ಡಿಸೋಜಾ ಹಾಗೂ ಶ್ರೀಮತಿ ಜುಲಿಯಾನ ಡಿಸೋಜಾ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ವಾಣಿವಿಲಾಸ ಹಿ.ಪ್ರಾ.ಶಾಲೆ ಅಶ್ವತ್ಥಪುರ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸರ್ವೋದಯ ಪ್ರೌಢಶಾಲೆ ಕಲ್ಲಮುಂಡ್ಕೂರು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ಶಿಕ್ಷಕಿಯರ ತರಬೇತಿ ಸಂಸ್ಥೆ ಕಿನ್ನಿಕಂಬಳ ಕೈಕಂಬ ಇಲ್ಲಿ ಪೂರೈಸಿ, ದಿನಾಂಕ 11.01.1996 ರಲ್ಲಿ ಸೇವೆಗೆ ಸೇರಿದ ಇವರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ನೀರ್ಕೆರೆ ಹಾಗೂ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಂಗೆಬೆಟ್ಟು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ನಾಗರತ್ನ
ಸ.ಹಿ.ಪ್ರಾ.ಶಾಲೆ ಇರ್ದೆ ಉಪ್ಪಳಿಗೆ ಪುತ್ತೂರು ತಾಲೂಕು.
ದಿನಾಂಕ 01/09/1999 ರಂದು ಸೇವೆಗೆ ಸೇರಿ ಅದೇ ಶಾಲೆಯಲ್ಲಿ ಇದೀಗ ಒಟ್ಟು 24ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಕೆಗಳು.
ಶ್ರೀಮತಿ ಉಮಾವತಿ ಪಿ
ಸ.ಹಿ.ಪ್ರಾ.ಶಾಲೆ ಅರಂತೋಡು
ಸುಳ್ಯ ತಾಲೂಕು
ಸುಳ್ಯ ತಾಲೂಕಿನ ಏನೆಕಲ್ಲು ಗ್ರಾಮದ ಶ್ರೀ ಸುಂದರ ಗೌಡ ಹಾಗೂ ಶ್ರೀಮತಿ ದೇವಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಪ್ರಾ.ಶಾಲೆ ಏನೆಕಲ್ಲು ಹಾಗೂ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಜೂನಿಯರ್ ಕಾಲೇಜು ಸುಬ್ರಹ್ಮಣ್ಯದಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಸರ್ವೋದಯ ಮಹಿಳೆಯರ ಶಿಕ್ಷಣ ತರಬೇತಿ ಸಂಸ್ಥೆ ವಿರಾಜಪೇಟೆ ಕೊಡಗು ಜಿಲ್ಲೆ ಇಲ್ಲಿ ಪೂರೈಸಿ, ದಿನಾಂಕ 12.01.1996 ರಲ್ಲಿ ಸ.ಹಿ.ಪ್ರಾ.ಶಾಲೆ ಕರಿಕ್ಕಳ ಇಲ್ಲಿ ಸೇವೆಗೆ ಸೇರಿದ ಇವರು ನಂತರ ದಿನಾಂಕ 01.07.2003 ರಲ್ಲಿ ಸ.ಹಿ.ಪ್ರಾ.ಶಾಲೆ ಗಾಂಧಿ ನಗರ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ದಿನಾಂಕ 07.10.2015 ರವರೆಗೆ ಸೇವೆ ಸಲ್ಲಿಸಿ ನಂತರ ದಿನಾಂಕ 08.10.2015 ರಂದು ಸ.ಮಾ.ಹಿ.ಪ್ರಾ.ಶಾಲೆ ಅರಂತೋಡು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಸೇವೆಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೆ ಸಮಾಜಕ್ಕೆ ತಮ್ಮಿಂದ ಇನ್ನಷ್ಟು ಸೇವೆಗಳು ಲಭಿಸಲಿ. ದೇವರು ತಮಗೆ ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತಿದ್ದೇವೆ.