ಕರ್ನಾಟಕ ರಾಜ್ಶ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು
ಗೌರವಾನ್ವಿತ ರಾಜ್ಯದ ಸಮಸ್ತ ಶಿಕ್ಷಕ ಬಂಧುಗಳೇ
ಕೊರೋನಾ ಸಂಕಷ್ಟ ಕಾಲದಲ್ಲಿ ನಾವು,ನೀವು ಎಲ್ಲರೂ ಅನೇಕ ಅನುಭವಗಳನ್ನು ಪಡೆದುಕೊಂಡಿದ್ದೇವೆ ಜೊತೆ ಜೊತೆಗೆ ನಮ್ಮ ಅನೇಕ ಜನ ವೃತ್ತಿ ಬಾಂಧವರನ್ನು ಕೊರೋನಾ ಮಹಾಮಾರಿ ತನ್ನ ಕಬಂಧ ಬಾಹುಗಳಲ್ಲಿ ಆವರಿಸಿಕೊಂಡು ಬಿಟ್ಟಿದೆ.
ಇಂತಹ ಸಂಕಷ್ಟ ಕಾಲದಲ್ಲಿ ನಾವು ನೀವೆಲ್ಲರೂ ನಮ್ಮ ಅನ್ನದಾತರಾದ ಮಕ್ಕಳ ಬಗ್ಗೆ ಒಮ್ಮೆ ಆಲೋಚಿಸಬೇಕಾಗುತ್ತದೆ.
ಬಂಧುಗಳೇ,ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷಾರಂಭದ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭಗೊಂಡಿದೆ,ಸರ್ಕಾರ ಜುಲೈ 1 ರಿಂದ ಶಾಲೆಗಳು ಪ್ರಾರಂಭಗೊಳ್ಳಲಿವೆ. 15 ಜೂನ್ ನಿಂದಲೇ ದಾಖಲಾತಿ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ ಎಂದು ಹೇಳಿದೆ.
ಈಗಾಗಲೇ ಖಾಸಗಿ ಶಾಲೆಗಳು ಎಲ್ ಕೆ ಜಿ ಯಿಂದಲೇ ಅನ್ ಲೈನ್ ತರಗತಿಗಳು ಪ್ರಾರಂಭಿಸಿದ್ದೇವೆ ಎಂದು ಪೋಷಕರ ಮನವೊಲಿಸುವ ಪ್ರಯತ್ನ ಸದ್ದಿಲ್ಲದೇ ಸಾಗಿದೆ.ಹಾಗಾದರೇ ನಮ್ಮ ಸರ್ಕಾರಿ ಶಾಲೆಗಳ ಮಕ್ಕಳ ಭವಿಷ್ಶದ ಬಗ್ಗೆ ಆಲೋಚಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಶವೆಂದು ಭಾವಿಸುತ್ತೇವೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ನಮ್ಮ ಮುಕ್ತ ಆಲೋಚನೆಗಳನ್ನು ನಾವು ನೀವೆಲ್ಲರೂ ಹಂಚಿಕೊಳ್ಳುವುದು ಸೂಕ್ತ ಅಲ್ಲವೇ ?
ಈ ನಿಟ್ಟಿನಲ್ಲಿ ಗೂಗಲ್ ಫಾರ್ಮ್ ರಚಿಸಿದ್ದು,ಸಂಬಂಧಿಸಿದಂತೆ ಪ್ರಶ್ನೆಗಳಿಗೆ ತಮ್ಮ ಮನದಾಳದ ಉತ್ತರಗಳನ್ನು ನೀಡುವುದರೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾವಾರು ಶಿಕ್ಷಕ ಬಳಗದ ಒಟ್ಟಾಭಿಪ್ರಾಯ ಸಂಗ್ರಹ ಮಾಡಲು ಸಹಕರಿಸಲು ಈ ಮೂಲಕ ಕೋರುತ್ತೇವೆ.
ಗೌರವಾನ್ವಿತ ಪ್ರೀತಿಯ ಶಿಕ್ಷಕ ಬಂಧುಗಳೇ,
ಕರ್ನಾಟಕ ರಾಜ್ಶ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಮ್ಮ ಬೇಕು ಬೇಡಿಕೆಗಳಿಗೆ ಗಟ್ಟಿಯಾಗಿ ಧ್ವನಿಯೆತ್ತುವುದರ ಜೊತೆಗೆ ಅನ್ನದಾತ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ಸದಾ ಕಂಕಣಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.
ಎಲ್ಲರೂ ತಮ್ಮ ಮನದಾಳದ ಭಾವನೆಗಳನ್ನು ಮುಕ್ತವಾಗಿ, ಹೃದಯಾಂತರಾಳದಿಂದ ಹಂಚಿಕೊಳ್ಳಬೇಕಾಗಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೆವೆ.