ರಾಜ್ಯ 7ನೇ ವೇತನ ಆಯೋಗದ ಪ್ರಮುಖ ಶಿಫಾರಸ್ಸುಗಳು

WhatsApp Group Join Now
Telegram Group Join Now

ಏಳನೇ ವೇತನ ಆಯೋಗದ ಅಧ್ಯಕ್ಷರಾದ ಶ್ರೀ ಸುಧಾಕರ್ ರಾವ್ ಅವರು ದಿನಾಂಕ 16.03.2024ರಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರಿಗೆ ಆರೋಗ್ಯದ ವರದಿಯನ್ನು ಸಲ್ಲಿಸಿರುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆಗಾಗಿ ಸಲ್ಲಿಸಿದ್ದ ಪ್ರಸ್ತಾವನೆಯ ಅಂಶಗಳನ್ನು ಪರಿಗಣಿಸಿ ಶಿಫಾರಸ್ನಸಿಲ್ಲಿ ಉಲ್ಲೇಖಿಸಿ ಈ ಮುಂದಿನಂತೆ ಶಿಫಾರಸ್ಸು ಮಾಡಲಾಗಿದೆ.

  • ದಿನಾಂಕ 01/07/2022ಕ್ಕೆ ಇದ್ದಂತೆ ರಾಜ್ಯ ಸರ್ಕಾರಿ ನೌಕರರ ಮೂಲವೇತನಕ್ಕೆ ಶೇಕಡಾ 27.50ರಷ್ಟು ಫಿಟ್ ಮೆಂಟ್ ಹೆಚ್ಚಿಸಲು ಶಿಫಾರಸ್ಸು.
  • ದಿನಾಂಕ 01/07/2022ಕ್ಕೆ ಇದ್ದಂತಹ ಶೇಕಡಾ 31% ರಷ್ಟು ತುಟ್ಟಿ ಭತ್ಯೆ ವಿಲೀನ ಹಾಗೂ ಮೇಲಿನ ಶೇ. 27.50ರಷ್ಟು ಸೇರಿ ಒಟ್ಟು ಶೇ. 58.50ರಷ್ಟು ಮೂಲ ವೇತನದಲ್ಲಿ ಹೆಚ್ಚಳ.
  • ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ರೂ. 17,000 ರಿಂದ ರೂ.27,000ಕ್ಕೆ ಗರಿಷ್ಠ ಮೂಲ ವೇತನವನ್ನು ರೂ.1,04,600 ರಿಂದ ರೂ. 2,41,200ಕ್ಕೆ ಹೆಚ್ಚಳ.
  • ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿ ಹಾಗೂ ಫಿಟ್ ಮೆಂಟ್ ಸೌಲಭ್ಯವನ್ನು ದಿನಾಂಕ 01/07/2022ರಿಂದ ಕಾಲ್ಪನಿಕವಾಗಿ ಅನುಷ್ಠಾನಗೊಳಿಸಲು ಶಿಫಾರಸ್ಸು.
  • ವಾರ್ಷಿಕ ವೇತನ ಭಡ್ತಿ ದರವನ್ನು ಕನಿಷ್ಠ ರೂ. 400 ರಿಂದ ರೂ. 650ಕ್ಕೆ ಗರಿಷ್ಠ ರೂ. 3100 -ರಿಂದ ರೂ.5000 ವರೆಗೆ ಹೆಚ್ಚಳ.
  • ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ದಿನಾಂಕ 01/07/2022ರಿಂದ ಭಾರತ ಸರ್ಕಾರವು ಮಂಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ ಶೇ.0.722ರಷ್ಟ‌ನ್ನು ನೀಡುವುದು.
  • ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದೆ ವೇತನ ಪರಿಷ್ಕರಿಸಿದಾಗ ಕೇಂದ್ರ ವೇತನ ರಚನೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕೇಂದ್ರ ಮಾದರಿಯ ವೇತನ ನೀಡಲು ಶಿಫಾರಸ್ಸು ನೀಡಿದೆ
  • ಗ್ರೂಪ್ ಸಿ ಮತ್ತು ಡಿ ವೃಂದದ ನೌಕರರಿಗೆ ಹಾಲಿ ಇರುವ ಜಿ.ಐ.ಎಸ್. ಮಾಸಿಕ ವಂತಿಗೆಯನ್ನು ಶೇ.100ಕ್ಕೆ ಹೆಚ್ಷಳ ಮತ್ತು ಗ್ರೂಪ್ ಎ ಮತ್ತು ಬಿ ವೃಂದಕ್ಕೆ ಶೇ.50% ರಷ್ಟು ಹೆಚ್ಚಿಸಲು ಶಿಫಾರಸ್ಸು.
  • ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ಮನೆ ಬಾಡಿಗೆ ಭತ್ಯೆಗಳನ್ನು ಕ್ರಮವಾಗಿ ಎ ವರ್ಗದ ನಗರಗಳಿಗೆ ಶೇ.20 ರಷ್ಟು ಬಿ ವರ್ಗದ ನಗರಗಳಿಗೆ ಶೇ.15 ರಷ್ಟು ಸೀ ವರ್ಗದ ಪ್ರದೇಶಗಳಿಗೆ ಶೇ.7.5 ರಷ್ಟು ಶಿಫಾರಸ್ಸು.
  • ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ನಗರ ಪರಿಹಾರ ಭತ್ಯೆಗಳನ್ನು ಕ್ರಮವಾಗಿ ಎ ಮತ್ತು ಬಿ ವೃಂದದ ನೌಕರರಿಗೆ ರೂ.600 ರಿಂದ ರೂ. 900ಕ್ಕೆ ಸಿ ಮತ್ತು ಡಿ ವೃಂದದ ನೌಕರರಿಗೆ ರೂ.500 ರಿಂದ ರೂ.750ಕ್ಕೆ ಹೆಚ್ಚಳ.
  • ಸಮಸ್ತ್ರ ಭತ್ಯೆ ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಬಗ್ಗೆ ದಿನಭತ್ಯ ಹಾಗೂ ವರ್ಗಾವಣೆ ಅನುದಾನವನ್ನು ಹಾಲಿ ಇರುವ ದರಗಳಲ್ಲಿ ಶೇ.25 ರಷ್ಟು ಹೆಚ್ಚಳ.
  • ವಿಕಲಚೇತನ ನೌಕರರಿಗೆ ಹಲವಾರು ಭತ್ಯೆಗಳು ಹಾಗೂ ಸೌಲಭ್ಯಗಳನ್ನು ಹೆಚ್ಚಳಕ್ಕೆ ಶಿಫಾರಸ್ಸು.
  • ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯನ್ನು ಮಾಸಿಕ ರೂ.1000 ದಿಂದ ರೂ.2000ಕ್ಕೆ ಹೆಚ್ಚಳ ಮಾಡಲು ಶಿಫಾರಸ್ಸು.
  • ನಾಲ್ಕು ಚಕ್ರವಾಹನ ಖರೀದಿ ಮುಂಗಡವನ್ನು ರೂ. 3.00 ಲಕ್ಷದಿಂದ ರೂ. 6.00 ಲಕ್ಷಕ್ಕೆ ಹಾಗೂ ದ್ವಿಚಕ್ರ ವಾಹನಕ್ಕೆ ರೂ.50,000 ದಿಂದ 80,000ಕ್ಕೆ ಹೆಚ್ಚಳ.
  • ಗ್ರಹ ನಿರ್ಮಾಣ ಮುಂಗಡವನ್ನು ಎ ವೃಂದಕ್ಕೆ 65.00 ಲಕ್ಷ ಮತ್ತು ಇತರ ವೃಂದದ ನೌಕರರಿಗೆ 40.00ಲಕ್ಷಕ್ಕೆ ಹೆಚ್ಚಳ.
  • ನೌಕರರ ಸೇವಾ ಅವಧಿಯಲ್ಲಿ ಮೂರು ಬಾರಿ ಎಲ್ ಟಿ ಸಿ ಸೌಲಭ್ಯಕ್ಕೆ ಅವಕಾಶ.
  • ಗ್ರೂಪ್ ಡಿ ಮತ್ತು ಸಿ ವೃಂದದ ನೌಕರರಿಗೆ ಹಾಲಿ ಇದ್ದಂತಹ ವೈದ್ಯಕೀಯ ಭತ್ಯೆ, ರೂ.200 ರಿಂದ ರೂ.500ಕ್ಕೆ ಹೆಚ್ಚಳ.
  • ಸರ್ಕಾರಿ ನೌಕರರ ಅವಲಂಬಿತ ಕುಟುಂಬ ಸದಸ್ಯರು ಅನಾರೋಗ್ಯದ ಸಂದರ್ಭದಲ್ಲಿ ಆರೈಕೆ ಮಾಡಲು ಶೇ.50% ವೇತನದೊಂದಿಗೆ 180 ದಿನಗಳ ಆರೈಕೆ ರಜೆ ಎಂಬ ಹೊಸ ಯೋಜನೆಗೆ ಶಿಫಾರಸ್ಸು.
  • ಸರ್ಕಾರಿ ಸೇವೆಗೆ ಸೇರುವ ಎರಡು ತಿಂಗಳ ಮೊದಲು ಹೆರಿಗೆಯಾದ ಮಹಿಳಾ ಸರ್ಕಾರಿ ನೌಕರರಿಗೆ ನವಜಾತ ಶಿಶುವಿನ ಆರೈಕೆಗಾಗಿ 18 ವಾರಗಳ ಹೆರಿಗೆ ರಜೆಗೆ ಶಿಫಾರಸ್ಸು ಮಾಡಿದೆ.
  • ಕೆಲಸ ವಿರಾಮ ಸಮತೋಲನವನ್ನು ಸಾಧಿಸಲು ಮತ್ತು ಕೆಲಸದ ಗುಣಮಟ್ಟ ಹೆಚ್ಚಿಸಲು ವಾರದಲ್ಐಲಿ ದು ದಿನಗಳ ಕೆಲಸದ ಅವಧಿಯನ್ನು ಶಿಫಾರಸ್ಸು ಮಾಡಿದೆ.
  • ರಾಜ್ಯ ಸರ್ಕಾರಿ ನೌಕರರ ಆಡಳಿತ ಇಲಾಖೆಯ ಹಾಗೂ ಕ್ಷೇತ್ರ ಇಲಾಖೆಗಳನ್ನು ನೌಕರರಿಗೆ ಗುಣಮಟ್ಟದ ತರಬೇತಿಗಾಗಿ ಸಮಗ್ರ ತರಬೇತಿಗೆ ಶಿಫಾರಸ್ಸು ಮಾಡಿದೆ .
  • ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ ರೀತಿಯಲ್ಲಿಯೇ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಸ್ಥಳೀಯ ಸಂಸ್ಥೆಗಳ ನೌಕರರು ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಅನ್ವಯಿಸಲು ಶಿಫಾರಸ್ಸು ಮಾಡಿದೆ.
  • ಮಾಸಿಕ ಪಿಂಚಣಿ ಯ ಪ್ರಮಾಣವು ಅಂತಿಮ ಮೂಲ ವೇತನದ ಶೇಕಡ 50ರಷ್ಟು ಹಾಗೂ ಕುಟುಂಬ ಪಿಂಚಣಿಯು ಶೇಕಡ 30ರಷ್ಟು ಮುಂದುವರಿದು ಕನಿಷ್ಠ ಪಿಂಚಣಿ ರೂ. 13,500 ಹಾಗೂ ಗರಿಷ್ಠ ಪಿಂಚಣಿ ರೂ.1,20,600ಕ್ಕೆ ಪರಿಷ್ಕರಿಸಿದೆ.
  • 70-80ರಷ್ಟು ವಯಸ್ಸಿನ ಪಿಂಚಣಿದಾರರ ಮೂಲ ಪಿಂಚಣಿಯ ಹೆಚ್ಚುವರಿ ಶೇಕಡ 10% ರಷ್ಟು ಶಿಫಾರಸ್ಸು ಮಾಡಿದೆ.
  • ಪಿಂಚಣಿದಾರರಿಗೆ ಸಂಧ್ಯಾ ಕಿರಣ ಎಂಬ ಆರೋಗ್ಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ. ಅಲ್ಲಿಯವರೆಗೆ ಮಾಸಿಕ 500 ರೂಪಾಯಿಗಳ ವೈದ್ಯಕೀಯ ಭತ್ಯೆಯನ್ನು ನೀಡಲು ಶಿಫಾರಸ್ಸು ಮಾಡಿದೆ.
  • ಪಿಂಚಣಿದಾರರು ಮರಣ ಹೊಂದಿದಲ್ಲಿ ಹತ್ತು ಸಾವಿರ ರೂಪಾಯಿಗಳ ಶವ ಸಂಸ್ಕಾರ ಮೊತ್ತವನ್ನು ನೀಡಲು ಶಿಫಾರಸ್ಸು ಮಾಡಿದೆ.
  • ವಿವಿಧ ವೃಂದಗಳ ವೇತನ ತಾರತಮ್ಯ ಹಾಗೂ ಇಲಾಖೆಯ ಬೇಡಿಕೆಗಳ ಸಂಬಂಧ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ನೀಡಿದ ಮನವಿಯನ್ನು ಪರಿಶೀಲಿಸಿ ಮತ್ತೊಂದು ಅಂತಿಮ ವರದಿಯನ್ನು ಆದಷ್ಟು ಶೀಘ್ರದಲ್ಲಿಯೇ ಆಯೋಗವು ಸರಕಾರಕ್ಕೆ ಸಲ್ಲಿಸಲಿದೆ.

https://kspstadk.com/wp-content/uploads/2024/07/7ನೇ-ವೇತನ-ಆಯೋಗದ-ಶಿಫಾರಸ್ಸಿನ-ಮುಖ್ಯಾಂಶಗಳು-2.pdf

WhatsApp Group Join Now
Telegram Group Join Now
Sharing Is Caring:

Leave a Comment