7 ನೇ ತರಗತಿಯ ಏಪ್ರಿಲ್ ಮಾಹೆಯ ಪರ್ಯಾಯ ಶೈಕ್ಷಣಿಕ ಯೋಜನೆಗಳು

7 ನೇ ತರಗತಿಯ ಏಪ್ರಿಲ್ ಮಾಹೆಯ ಪರ್ಯಾಯ ಶೈಕ್ಷಣಿಕ ಯೋಜನೆ

7 ನೇ ತರಗತಿ, ಏಪ್ರಿಲ್ ಮಾಹೆಯ ಪರ್ಯಾಯ ಶೈಕ್ಷಣಿಕ ಯೋಜನೆ ಬಗ್ಗೆ ಹೆಚ್ಚಿನ ವಿವರ :

ಏಪ್ರಿಲ್-2021 ಮಾಹೆಯಲ್ಲಿ ಕಲಿಕೆಯನ್ನು ಪರಿಣಾಮಕಾರಿಯಾಗಿ ಮಾಡಲು ಕೈಗೊಳ್ಳಬೇಕಾದ
ಮಾರ್ಗಸೂಚಿ

• ವಿದ್ಯಾರ್ಥಿಗಳು ಸಂವೇದ ಇ-ಕಲಿಕಾ ತರಗತಿಗಳಲ್ಲಿ 7ನೇ ತರಗತಿಯ ಎಲ್ಲಾ ವಿಷಯಗಳಲ್ಲಿ ಕಲಿತಿರುವ
ಕಲಿಕಾಂಶಗಳನ್ನು ಖಾತ್ರಿಪಡಿಸಿಕೊಳ್ಳಲು ಏಪ್ರಿಲ್ 2021 ಮಾಹೆಯಲ್ಲಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಯೋಜಿಸಿರುವ ಸಾಮರ್ಥ್ಯಗಳು /ಪರಿಕಲ್ಪನೆಗಳಿಗೆ ಸಂಬಂಧಿಸಿದಂತೆ ಒದಗಿಸಲಾಗಿರುವ ನಿರ್ದಿಷ್ಟ ಅಥವಾ ಸಲಹಾತ್ಮಕ ಚಟುವಟಿಕೆ/ ಅಭ್ಯಾಸ ಹಾಳೆಗಳನ್ನು ಬಳಸಿಕೊಂಡು ಕಲಿಕೆಯನ್ನು ಪರಿಣಾಮಕಾರಿಯನ್ನಾಗಿಸುವುದು ಹಾಗೂ ಕಲಿಕೆಯನ್ನು ಪುನರ್ಬಲನಗೊಳಿಸಲು ಚಟುವಟಿಕೆಗಳನ್ನು ಕೈಗೊಳ್ಳುವುದು.

• ಏಪ್ರಿಲ್‌ನ ಮೊದಲ ವಾರದಿಂದಲೇ ಇಲಾಖೆಯಿಂದ ಕಲಿಕೆಗಾಗಿ ಒದಗಿಸಲಾಗಿರುವ ಪರಾಯ ಶೈಕ್ಷಣಿಕ
ಯೋಜನೆಯನ್ನು ಬಳಸಿಕೊಂಡು ಕಲಿಕೆಯನ್ನು ಪರಿಣಾಮಕಾರಿಯಾಗಿಸುವುದು.

• ಏಪ್ರಿಲ್ ಮಾಹೆಯಲ್ಲಿ ಇಲಾಖೆ ನಿಗಧಿಪಡಿಸಿದ ಸಾಮರ್ಥ್ಯಗಳು /ಪರಿಕಲ್ಪನೆಗಳನ್ನು ಮುಂದುವರಿಸುವುದು,

• ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಒದಗಿಸಲಾದ ಅಭ್ಯಾಸ ಚಟುವಟಿಕೆ /ಅಭ್ಯಾಸ ಹಾಳೆಗಳನ್ನು
ತಲುಪುವಂತೆ ಮಾಡಿ, ಅವುಗಳನ್ನು ಹಿಂಪಡೆದು ಅವರಲ್ಲಿನ ಕಲಿಕಾ ಅಂತರಗಳನ್ನು ಗುರ್ತಿಸಿಕೊಂಡು,
ಶಾಲೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಜೊತೆಜೊತೆಯಲ್ಲಿಯೇ ಆ ವಿದ್ಯಾರ್ಥಿಗಳಿಗೂ ಸ್ವ-ಕಲಿಕೆಗೆ
ಅನುಕೂಲಿಸುವುದು.

• ಈಗಾಗಲೇ ಈ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳು ಗಳಿಸಿದ್ದರೆ, ಚಟುವಟಿಕಾ ಹಾಳೆಗಳ ಮೂಲಕ
ಅವುಗಳನ್ನು ಖಾತ್ರಿಪಡಿಸಿಕೊಂಡು, ಅಂತಹ ವಿದ್ಯಾರ್ಥಿಗಳಿಗೆ ಸ್ವ-ಕಲಿಕೆಗೆ ಅವಕಾಶ ಮಾಡಿಕೊಟ್ಟು
ಇಲ್ಲವೇ ಸಂವೇದ ಇ- ಸಂಪನ್ಮೂಲಗಳನ್ನು ಬಳಸಿಕೊಂಡು ಕಲಿಕೆಯನ್ನು ಸಮರ್ಥಗಳಿಸಲು ಅನುವು
ಮಾಡಿಕೊಡುವುದು.

• ಇಲಾಖೆ ಒದಗಿಸಿರುವ ಚಟುವಟಿಕೆ / ಅಭ್ಯಾಸ ಹಾಳೆಗಳು ಕೇವಲ ಮಾದರಿಗಳಾಗಿದ್ದು ಇವುಗಳ
ಜೊತೆಗೆ ನಿಮ್ಮ ಸ್ವಂತ ಆಲೋಚನೆಗೆ ತಕ್ಕಹಾಗೆ ಅಧ್ಯಾಯದಲ್ಲಿನ ಕಲಿಕಾ ಸಾಮರ್ಥ್ಯಗಳಲ್ಲಿ ಕಲಿಕೆಯನ್ನು
ವಿದ್ಯಾರ್ಥಿಗಳು ಗಳಿಸಿದ್ದಾರೆಯೇ ಇಲ್ಲವೇ ಎಂದು ಖಾತ್ರಿ ಪಡಿಸಿಕೊಳ್ಳಲು ಅಥವಾ ನಿರಂತರ ಕಲಿಕಾ ಕಾರ್ಯಕ್ರಮ ಮುಂದುವರೆಸಲು ಹೊಸ ಚಟುವಟಿಕೆ /ಅಭ್ಯಾಸ ಹಾಳೆಗಳನ್ನು ತಯಾರಿಸಿಕೊಳ್ಳಲು
ಅವಕಾಶವಿದೆ.

• ಇಲಾಖೆಯವರು ನೀಡಿರುವ ಅಭ್ಯಾಸ ಪುಸ್ತಕಗಳಲ್ಲಿ ಇರುವ ಚಟುವಟಿಕಾ ಹಾಳೆಗಳನ್ನು ಸಹ ಬಳಸಿಕೊಂಡು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸ್ವ-ಕಲಿಕೆಯನ್ನು ಅನುಕೂಲಿಸುವುದು.

• ತರಗತಿಗನುಗುಣವಾಗಿ, ವಿಷಯಕ್ಕನುಗುಣವಾಗಿ, ಸಾಮರ್ಥ್ಯಗಳನ್ನು ಗುರ್ತಿಸಿ, ಸಂಯೋಜಿಸಿ
ಕಲಿಸಬಹುದಾದ ಪರಿಕಲ್ಪನೆಗಳಿಗೆ ವಿಶೇಷ ಸೂಚನೆಯನ್ನು ವಿಷಯವಾರು ಚಟುವಟಿಕೆಗಳಲ್ಲಿ
ನೀಡಲಾಗಿದೆ.

• ಕೆಲವೊಂದು ಸಹಸಂಬಂಧವನ್ನು ಹೊಂದಿರುವ ವಿಷಯಗಳನ್ನು ಕ್ರೋಢೀಕರಿಸಿ ಬೊಧನೆ ಮಾಡುವ
ಅವಕಾಶ ಎಲ್ಲ ಶಿಕ್ಷಕರಿಗೂ ಮುಕ್ತವಾಗಿರುತ್ತದೆ.

Sharing Is Caring:

Leave a Comment