5,8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳನ್ನು SATS ನಲ್ಲಿ ಪ್ರೋಮೋಟ್ ಮಾಡುವ ಹಂತಗಳು.
Step 1 – User ID ಮತ್ತು Password ಬಳಸಿ SATS ಲಾಗಿನ್ ಆಗುವುದು.
Step 2 – ಎಡಬದಿಯಲ್ಲಿರುವ Student Management 1-10 Option ಮೇಲೆ ಕ್ಲಿಕ್ ಮಾಡಿ.
Step 3- ಮೊದಲಿಗೆ Promotion details ಎಂಬ option ಕಾಣುತ್ತದೆ.
Step 4 – Promotion details ನಲ್ಲಿ Promote student ಮೇಲೆ ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆದುಕೊಳ್ಳುತ್ತದೆ.
Step 5- ಅಲ್ಲಿ ತರಗತಿಯನ್ನು ( 5,8,9) ನಮೂದಿಸಿ, Search ಕೊಡಿ. ಆಗ ಮಕ್ಕಳ ಪಟ್ಟಿ ಕಾಣುತ್ತದೆ. ಒಂದು ವೇಳೆ ಈಗಾಗಲೇ FA1, FA2, FA3 , FA4 ಹಾಗೂ SA1 ಪರೀಕ್ಷೆಗಳ ರಿಸಲ್ಟ್ Submit ಮಾಡಿದ್ದರೆ ಮಕ್ಕಳ ಹೆಸರಿನ ಎದುರಿಗಿರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ Submit ಕೊಡಬಹುದು.
ನೀವು ಯಾವುದಾದರೂ ರಿಸಲ್ಟ್ ತುಂಬಲು ಬಾಕಿ ಇದ್ದರೆ CCE Result not filled ಎಂದು ಮಗುವಿನ ಎದರು ಕಾಣುತ್ತದೆ. ಆಗ ಕೆಳಗಿನ ಹಂತಗಳನ್ನು ಅನುಸರಿಸಿ.
Step 6- ಎಡಬದಿಯಲ್ಲಿರುವ Menu bar ನಲ್ಲಿ Report ಎಂಬ option ಮೇಲೆ ಕ್ಲಿಕ್ ಮಾಡಿ— Mis Report ಎಂಬ Option ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ –ಮುಂದೆ Result Monitoring report ಎಂಬ option ಕ್ಲಿಕ್ ಮಾಡಿ.
Step 7- Academic year 2023-24 select ಮಾಡಿ ತರಗತಿಯನ್ನು select ಮಾಡಿ search ಕೊಟ್ಟಾಗ ಯಾವ ಪರೀಕ್ಷೆಯ ರಿಸಲ್ಟ್ ತುಂಬಲು ಬಾಕಿ ಇದೆ ಎಂಬುದು ತಿಳಿಯುತ್ತದೆ.
ಈಗ Result ತುಂಬಲು ಕೆಳಗಿನ ಹಂತವನ್ನು ಅನುಸರಿಸಬೇಕು
Step 8 – Menu bar ನಲ್ಲಿ Student management 1-10 –> CCE result —> Generate Result form ಮೇಲೆ ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆದುಕೊಳ್ಳುತ್ತದೆ.
Step 9 – Academic year 2023- 24 ಮಾಡಿ ಸಂಬಂಧಿಸಿದ Medium select ಮಾಡಿ — ತರಗತಿ select ಮಾಡಿ — ಯಾವ ಪರೀಕ್ಷೆಯ ಗ್ರೇಡ್ ತುಂಬಲು ಬಾಕಿ ಇದೆ ಅದನ್ನು select ಮಾಡಿ — language group select ಮಾಡಿ Search ಕೊಡಿ .
Step 10- Result entry ಮಾಡಲು option ಬರುತ್ತದೆ.
Step 11- Result entry ಮಾಡಿದ ಮೇಲೆ Promote ಮಾಡಲು ಮತ್ತೆ Menu bar ನಲ್ಲಿ
Student management 1&10 —> Promotion details —> Promote student ಮೇಲೆ ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ತರಗತಿ academic year 2023-24 ನಮೂದಿಸಿ search ಕೊಡಿ. ಆಗಲೂ CCE Result not filled ಎಂದು ಕಾಣಿಸುತ್ತಿದ್ದರೆ ನೀವು ಒಂದು ದಿನ ಕಾಯಬೇಕಾಗುತ್ತದೆ .
ಮರುದಿನ Student management 1-10 —-> Promotion details–> Promote student—> class academic year 2023-24 select ಮಾಡಿ Search ಕೊಡಿ.
Step 12– ಮಕ್ಕಳ ಪಟ್ಟಿ ಕಾಣಿಸುತ್ತದೆ. ಮೇಲ್ಗಡೆ Promote ಎಂಬ ಬಾಕ್ಸ್ ಮೇಲೆ ಕ್ಲಿಕ್ ಮಾಡಿ Submit ಕೊಡಿ.
Successfully student data promoted ಎಂದು ಬರುತ್ತದೆ. ಈಗ ಆ ಮಕ್ಕಳ Promotion ಆಗಿರುತ್ತದೆ.