ನಿಮ್ಮ ನಿವೃತ್ತಿ ಜೀವನ ಸುಖಕರವಾಗಲಿ
ದಶಕಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಅಕ್ಷರ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.
ಶ್ರೀ ಚಿದಾನಂದ ಗೌಡ
ಮುಖ್ಯ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಕೊಂಬಾರು
ಕಡಬ ತಾಲೂಕು
ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಶ್ರೀಯುತ ಶಿವಣ್ಣ ಗೌಡ ಹಾಗೂ ಶ್ರೀಮತಿ ವೆಂಕಮ್ಮ ದಂಪತಿಗಳ ಪುತ್ರನಾಗಿ ದಿನಾಂಕ 01.06.1964 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕೊಂಬಾರು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶ್ರೀ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಶಿಕ್ಷಕರ ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಪೂರೈಸಿ, ದಿನಾಂಕ 06.02.1990 ರಲ್ಲಿ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಸ.ಕಿ.ಪ್ರಾ.ಶಾಲೆ ಅಡಿಂಜೆ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕೊಂಬಾರು ಇಲ್ಲಿಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ 10 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಜಿನಪ್ಪ ಗೌಡ ಎಸ್
ಸ.ಹಿ.ಪ್ರಾ.ಶಾಲೆ ಬಂಟ್ರ
ಕಡಬ ತಾಲೂಕು
ಕೊಂಬಾರು ಗ್ರಾಮದ ಸರಪ್ಪಾಡಿ ಮನೆಯ ಶ್ರೀಯುತ ರಾಮಣ್ಣ ಹಾಗೂ ರಾಮಕ್ಕ ದಂಪತಿಗಳ ಪುತ್ರನಾಗಿ ದಿನಾಂಕ 01.06.1964 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಕೊಂಬಾರು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಜೂನಿಯರ್ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಶಿಕ್ಷಕರ ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಪೂರೈಸಿ, ದಿನಾಂಕ 29.11.1997 ರಲ್ಲಿ ಸ.ಹಿ.ಪ್ರಾ.ಶಾಲೆ ಕುಂಟಿಕಾನ ಪುತ್ತೂರು ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕೊಂಬಾರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 10.04.2012 ರಲ್ಲಿ ಸ.ಹಿ.ಪ್ರಾ.ಶಾಲೆ ಬಂಟ್ರ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಕೃಷ್ಣವೇಣಿ ಕೆ
ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಕಲ್ಲೇರಿ ಅರಳ
ಬಂಟ್ವಾಳ ತಾಲೂಕು
ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಶ್ರೀಯುತ ಕೊರಗ ಮೂಲ್ಯ.ಕೆ.ಹಾಗೂ ಶ್ರೀಮತಿ ಬಿ.ಮುತ್ತು ದಂಪತಿಗಳ ಪುತ್ರಿಯಾಗಿ ದಿನಾಂಕ 01.06.1964 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಶ್ರೀ ಚಂದ್ರನಾಥ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಳ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಶ್ರೀ ವೆಂಕಟರಮಣ ಸ್ವಾಮಿ ಪ್ರೌಢ ಶಾಲೆ ಬಂಟ್ವಾಳ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ತರಬೇತಿ ಸಂಸ್ಥೆ ಕೈಕಂಬ ಇಲ್ಲಿ ಪೂರೈಸಿ, ದಿನಾಂಕ 14.02.1996 ರಲ್ಲಿ ಸ.ಹಿ.ಪ್ರಾ.ಶಾಲೆ ಕುಟ್ಟಿಕಳ ಅಜಿಲಮೊಗರು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 10.04.2007 ರಲ್ಲಿ ಸ.ಹಿ.ಪ್ರಾ.ಶಾಲೆ ಬ್ರಹ್ಮರಕೂಟ್ಲು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 28.08.2014 ರಂದು ಸ.ಕಿ.ಪ್ರಾ.ಶಾಲೆ ಕಲ್ಲೇರಿ ಅರಳ ಇಲ್ಲಿ ವರ್ಗಾವಣೆ ಗೊಂಡು ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರಾಜಮ್ಮ ಕೆ
ಸಹ ಶಿಕ್ಷಕಿ
ಸ.ಹಿ.ಪ್ರಾ.ಶಾಲೆ ಪೂಪಾಡಿಕಟ್ಟೆ
ಬಂಟ್ವಾಳ ತಾಲೂಕು.
ಕಡಬ ತಾಲೂಕಿನ ಕಾಯಂದೂರಿನ ಶ್ರೀಯುತ ಹರಿಶ್ಚಂದ್ರ ಭಂಗ ಹಾಗೂ ಶ್ರೀಮತಿ ಪುಷ್ಪಾವತಿ ದಂಪತಿಗಳ ಪುತ್ರಿಯಾಗಿ ದಿನಾಂಕ 26.05.1964 ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಮಾ.ಹಿ.ಪ್ರಾ.ಶಾಲೆ ಕಡಬ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜು ಕಡಬ ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಕುಮುದಾ ಉಮಾ ಶಂಕರ ತರಬೇತಿ ಸಂಸ್ಥೆ ಕೊಕ್ಕರ್ಣೆ ಉಡುಪಿ ಇಲ್ಲಿ ಪೂರೈಸಿ, ದಿನಾಂಕ 03.08.1998 ರಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸರಪಾಡಿ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಪೂಪಾಡಿಕಟ್ಟೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ವಸಂತ ಕೆ
ಸಹ ಶಿಕ್ಷಕರು
ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ನರಿಂಗಾನ
ಬಂಟ್ವಾಳ ತಾಲೂಕು.
ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ಕೋಡಿ ಎಂಬಲ್ಲಿ ಶ್ರೀಯುತ ತಿಮ್ಮಪ್ಪ ಪೂಜಾರಿ ಹಾಗೂ ಶ್ರೀಮತಿ ರಾಮಕ್ಕು ದಂಪತಿಗಳ ಪುತ್ರನಾಗಿ ದಿನಾಂಕ 01.06.1964 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ನರಿಂಗಾನ ಹಾಗೂ ಪ್ರೌಢ ಶಿಕ್ಷಣವನ್ನು ಆನಂದಾಶ್ರಮ ಹೈಸ್ಕೂಲ್ ಕೋಟೆಕಾರು ಸೋಮೇಶ್ವರ ಇಲ್ಲಿ ಪೂರೈಸಿ ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಕಾಲೇಜು ಮಂಗಳೂರು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ಶಿಕ್ಷಕ ತರಬೇತಿ ಸಂಸ್ಥೆ ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿ ಪೂರೈಸಿ ದಿನಾಂಕ 15.02.1996 ರಲ್ಲಿ ಸ.ಹಿ.ಪ್ರಾ.ಶಾಲೆ ಕುದ್ರಡ್ಕ ಬೆಳ್ತಂಗಡಿ ತಾಲೂಕು ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.ನಂತರ ಬಂಟ್ವಾಳ ತಾಲೂಕಿನ ಪಾಣಿಲಬರಿಕೆ ಶಾಲೆಗೆ ವರ್ಗಾವಣೆ ಗೊಂಡು ಇಲ್ಲಿ 10 ವರ್ಷಗಳ ಕಾಲ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ನರಿಂಗಾನ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ರೋಟರಿ ಕ್ಲಬ್ ದೇರ್ಲಕಟ್ಟೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಜೆಸಿಐ ಉತ್ತಮ ಶಿಕ್ಷಕ ಪ್ರಶಸ್ತಿ, ಮಂಗಳೂರು ಮ್ಯಾಕ್ಸ್ ಇನ್ಶೂರೆನ್ಸ್ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಶಶಿಪ್ರಭಾ ಬಿ
ಸಹಶಿಕ್ಷಕರು
ಸ.ಹಿ.ಪ್ರಾ.ಶಾಲೆ ಪೆರಿಂಜೆ
ಬೆಳ್ತಂಗಡಿ ತಾಲೂಕು
ಮೂಡುಬಿದಿರೆ ವಾಲ್ಪಾಡಿ ಹೆಗ್ಡೆ ಮನೆ ಶ್ರೀಯುತ ಕೆ.ಧರಣಪ್ಪ ಹೆಗ್ಡೆ ಹಾಗೂ ಶ್ರೀಮತಿ ಕಮಲ ಹೆಗ್ಡೆ ದಂಪತಿಗಳ ಪುತ್ರಿಯಾಗಿ 01.06.1964 ರಂದು ಜನಿಸಿದ ಇವರು ದೊಡ್ಡಪ್ಪ ನಿವೃತ್ತ ಶಿಕ್ಷಕರಾದ ಹಟ್ಟಾಜೆ ಬಿ ನಾರಾಯಣ ಹೆಗ್ಡೆ, ದೊಡ್ಡಮ್ಮ ರಾದ ನೇತ್ರಾವತಿ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಇವರೆಂದರೆ ಇವರಿಗೆ ವಿಶೇಷ ಗೌರವ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಬಜಿರೆ ಹಾಗೂ ಅ.ಹಿ.ಪ್ರಾ.ಶಾಲೆ ವಿದ್ಯೋದಯ ವೇಣೂರು ಇಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ವೇಣೂರು ಇಲ್ಲಿ ಪೂರೈಸಿದ ಇವರು ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ತರಬೇತಿ ಸಂಸ್ಥೆ ಕಿನ್ನಿಕಂಬಳ ಗುರುಪುರ ಇಲ್ಲಿ ಪೂರೈಸಿ ಹಿಂದಿಯಲ್ಲಿ ಭಾಷಾ ಪ್ರವೀಣ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದರು, ಇವರು ದಿನಾಂಕ 10.07.1996 ರಲ್ಲಿ ಸ.ಹಿ.ಪ್ರಾ.ಶಾಲೆ ಬಜಿರೆ ಇಲ್ಲಿ ಸೇವೆಗೆ ಸೇರಿದರು. ನಂತರ ದಿನಾಂಕ 11.08.2003 ರಲ್ಲಿ ಸ.ಹಿ.ಪ್ರಾ.ಶಾಲೆ ಪೆರಿಂಜೆ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರು ಪ್ರಸ್ತುತ ಮೂಡುಬಿದಿರೆಯ ಭೂಮಿಕಾದಲ್ಲಿ ಪತಿ ನಿವೃತ್ತ ಶಿಕ್ಷಕರಾದ ಸಿ. ಶೇಖರ ಹೆಗ್ಡೆ, ಮಗ ಉದ್ಯಮಿಯಾದ ಮನೋಜ್ ಹೆಗ್ಡೆ, ಸೊಸೆ ಅಕ್ಷತಾ ಹೆಗ್ಡೆ, ಮೊಮ್ಮಕ್ಕಳಾದ ಸತ್ಕ್ರತಿ ಹಾಗೂ ಸ್ತವ್ಯ ರೊಂದಿಗೆ ಸುಖೀ ಜೀವನ ನಡೆಸುತ್ತಿರುವ ತಮಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸುಗುಣ ಕುಮಾರಿ ಹೆಚ್
ಸ.ಕಿ.ಪ್ರಾ.ಶಾಲೆ ಕೊಳ್ಕೆಬೈಲು
ಬೆಳ್ತಂಗಡಿ ತಾಲೂಕು
ಶಿಶಿಲ ಹೊಸಮನೆ ಶ್ರೀಯುತ ಗಣಪತಿ ಪಾಠಕ್ ಹಾಗೂ ಶ್ರೀಮತಿ ಸುಲೋಚನಾ ಪಾಠಕ್ ದಂಪತಿಗಳ ಪುತ್ರಿಯಾಗಿ ದಿನಾಂಕ 05.05.1964 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ಕೊಳ್ಕೆಬೈಲು ಹಾಗೂ ಸ.ಹಿ.ಪ್ರಾ.ಶಾಲೆ ಶಿಶಿಲ ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿ ಪೂರೈಸಿ ಶಿಕ್ಷಕ ತರಬೇತಿಯನ್ನು ರೋಸಾ ಮಿಸ್ತಿಕಾ ತರಬೇತಿ ಸಂಸ್ಥೆ ಕಿನ್ನಿಕಂಬಳ ಇಲ್ಲಿ ಪೂರೈಸಿ,ದಿನಾಂಕ 21.06.1985 ರಲ್ಲಿ ಆಶ್ರಮ ಶಾಲೆ ಶಿಶಿಲ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ 16.01.1996 ರಲ್ಲಿ ಸ.ಹಿ.ಪ್ರಾ.ಶಾಲೆ ಶಿಶಿಲ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ 22.06.2011 ರಲ್ಲಿ ಸ.ಕಿ.ಪ್ರಾ.ಶಾಲೆ ಕೊಳ್ಕೆಬೈಲು ಇಲ್ಲಿ ಸೇವೆ ಸಲ್ಲಿಸಿ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸುಮತಿ ಬಾಯಿ .ಎ.ಪಿ
ದ.ಕ.ಜಿ.ಪಂ.
ಹಿ.ಪ್ರಾ.ಶಾಲೆ,ಪರಪಾದೆ ಮಂಗಳೂರು ಉತ್ತರ
16-11-1988 ಸೇವೆಗೆ ಸೇರಿದ ಇವರು 16/11/1988 ರಿಂದ ಸ.ಹಿ.ಪ್ರಾ.ಶಾಲೆ,ಯಡಜಿಗಳೇಮನೆ,
ಸಾಗರ(ತಾ), ಶಿವಮೊಗ್ಗ (ಜಿ). ಸೇವೆ ಸಲ್ಲಿಸಿ ನಂತರ
1998-2012 ರವರೆಗೆ
ದ.ಕ.ಜಿ.ಪಂ.ಸ.ಮಾ.ಹಿ.ಪ್ರಾ.ಶಾಲೆ
ಮೂಡುಶೆಡ್ಡೆ, ಮಂಗಳೂರು ದಕ್ಷಿಣ,
2012-2016 ರಿಂದ
ದ.ಕ.ಜಿ.ಪಂ.ಸ.ಮಾ.ಹಿ.ಪ್ರಾ.ಶಾಲೆ,
ಮರಕಡ, ಮಂಗಳೂರು ಉತ್ತರ ಮತ್ತು 2016 ರಿಂದ2024 ರವರೆಗೆ
ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ,
ಪರಪಾದೆ, ಮಂಗಳೂರು ಉತ್ತರ ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ಸ್ವಯಂ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಸರೋಜಿನಿ ಟಿ
ದ.ಕ.ಜಿ.ಪಂ.ಉರ್ದು.ಹಿ.ಪ್ರಾ.ಶಾಲೆ
ಗುರುಕಂಬಳ
ಮಂಗಳೂರು ದಕ್ಷಿಣ
ಇವರು ತಮ್ಮ ಸುಧೀರ್ಘ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ರೋಹಿಣಿ ಕೆ
ಸಹ ಶಿಕ್ಷಕರು
ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮೂಡುಬಿದಿರೆ ಮೈನ್
ಮೂಡುಬಿದಿರೆ ತಾಲೂಕು
ಬಂಟ್ವಾಳ ತಾಲೂಕಿನ ಪೆರುವಾಯಿ ಎಂಬಲ್ಲಿ ಶ್ರೀಯುತ ತಿಮ್ಮ ಮೂಲ್ಯ ಹಾಗೂ ಶ್ರೀಮತಿ ಕಮಲ ದಂಪತಿಗಳ ಪುತ್ರಿಯಾಗಿ ದಿನಾಂಕ 09.05.1964ರಂದು ಜನಿಸಿದ ಇವರು ದಿನಾಂಕ 09.02.1996 ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಒಡ್ಡೂರು ಗಂಜಿಮಠ ಇಲ್ಲಿ ಸೇವೆಗೆ ಇವರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 30.07.2012 ರಲ್ಲಿ ದ.ಕ.ಜಿ.ಪಂ.ಉ.ಪ್ರಾ.ಶಾಲೆ ಮೂಡುಬಿದಿರೆ ಮೈನ್ ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಸುಧಾಕರ್
ಸಹ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ದರೆಗುಡ್ಡೆ
ಮೂಡುಬಿದಿರೆ ತಾಲೂಕು
ಶ್ರೀಯುತ ರವಿರಾಜ್ ಬಲ್ಲಾಳ್ ಹಾಗೂ ಶ್ರೀಮತಿ ವಿಜಯಾ ದಂಪತಿಗಳ ಪುತ್ರನಾಗಿ ದಿನಾಂಕ 01.06.1964 ರಲ್ಲಿ ಜನಿಸಿದ ಇವರು ದಿನಾಂಕ 08.12.1998 ರಲ್ಲಿ ಸ.ಹಿ.ಪ್ರಾ.ಶಾಲೆ ಮಾಂಟ್ರಾಡಿ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಅಳಿಯೂರು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಪೆರಿಬೆಟ್ಟು ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ದಿನಾಂಕ 07.12.2021 ರಲ್ಲಿ ಸ.ಹಿ.ಪ್ರಾ.ಶಾಲೆ ದರೆಗುಡ್ಡೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಭಾಸ್ಕರ ಎನ್
ಸಹಶಿಕ್ಷಕರು
ಸ.ಮಾ.ಉ.ಹಿ.ಪ್ರಾ.ಶಾಲೆ ಕಾವು ಪುತ್ತೂರು ತಾಲೂಕು
ತಂದೆ: ಎನ್ ಕುಶಾಲಪ್ಪ ಗೌಡ
ತಾಯಿ: ಲಿಂಗಮ್ಮ
ಜನನ ದಿನಾಂಕ: 10.05-1964
ಜನನ ಸ್ಥಳ: ಸುಳ್ಯ ತಾಲೂಕಿನ ಕನಕಮಜಲು
ಸೇವೆಗೆ ಸೇರಿದ ದಿನಾಂಕ: 11-12-1998
ಒಂದೇ ಶಾಲೆಯಲ್ಲಿ ಸುಮಾರು 26 ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇಂದು ನಿವೃತ್ತರಾಗುತ್ತಿರುವಿರಿ. ಪತ್ನಿ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ತಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಕೆ ಶೀಲಾವತಿ
ಪದವಿಧರೇತರ ಮುಖ್ಯಗುರುಗಳು
ಕೆ ಪಿ ಎಸ್ ಕುಂಬ್ರ ಪುತ್ತೂರು ತಾಲೂಕು
ತಂದೆ: ಗುರುವ ಕೆ
ತಾಯಿ: ಬೆಳ್ಳೆಚ್ಚಿ
ಜನನ ದಿನಾಂಕ: 01-06-1964
ಸೇವೆಗೆ ಸೇರಿದ ದಿನಾಂಕ:1990
ಸೇವೆ ಸಲ್ಲಿಸಿದ ಶಾಲೆಗಳು: ಸ.ಕಿ.ಪ್ರಾ.ಶಾಲೆ ಪಳ್ಳತ್ತಾರು,
ಸ.ಕಿ.ಪ್ರಾ.ಶಾ.ಪಾರ
ಸ.ಹಿ.ಪ್ರಾ.ಶಾ.ಮಿತ್ತಡ್ಕ
ಸ.ಹಿ.ಪ್ರಾ.ಶಾಲೆ ದೂಮಡ್ಕ.
ಸ.ಮಾ.ಉ.ಹಿ.ಪ್ರಾ.ಶಾ.ಪಾಣಾಜೆ
ಸುಮಾರು 34 ವರ್ಷಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇಂದು ನಿವೃತ್ತರಾಗುತ್ತಿರುವಿರಿ. ಕೇರಳದ ಮಂಜೇಶ್ವರ ತಾಲೂಕು ಸ್ವರ್ಗದಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ತಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.
ಶ್ರೀಮತಿ ಭಾಗೀರಥಿ ತುಕಾರಾಮ್
ಸ.ಹಿ.ಪ್ರಾ.ಶಾಲೆ ಬಳ್ಪ
ಸುಳ್ಯ ತಾಲೂಕು
ತೊಡಿಕಾನ ಗ್ರಾಮದ ನಾರ್ಕೋಡು ಶ್ರೀಯುತ ಕೃಷ್ಣಪ್ಪ ಗೌಡ ಹಾಗೂ ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರಿಯಾಗಿ ದಿನಾಂಕ 01.06.1964 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಮಾ.ಹಿ.ಪ್ರಾ.ಶಾಲೆ ಅರಂತೋಡು ಇಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪೂರೈಸಿ ದೈಹಿಕ ಶಿಕ್ಷಣ ಕುಶಾಲ ನಗರದ ಸತ್ಯ ಸಾಯಿ ದೈಹಿಕ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಪೂರೈಸಿ, ದಿನಾಂಕ 04.05.1985 ರಲ್ಲಿ ಸ.ಹಿ.ಪ್ರಾ.ಶಾಲೆ ತೊಡಿಕಾನ ಇಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಬಳ್ಪ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಭುವನೇಶ್ವರಿ ಕಂಬಳ
ಸ.ಮಾ.ಹಿ.ಪ್ರಾ.ಶಾಲೆ ಪಂಜ.
ಸುಳ್ಯ ತಾಲೂಕು
ಕೂಜುಗೋಡು ಕಟ್ಟೆಮನೆ ಶ್ರೀಯುತ ಸಾಂತಪ್ಪ ಗೌಡ ಹಾಗೂ ಶ್ರೀಮತಿ ಅಮ್ಮಣ್ಣಿ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು ದಿನಾಂಕ 29.07.1994 ರಲ್ಲಿ ಬಂಟ್ವಾಳ ತಾಲೂಕಿನ ನಂದಾವರ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಗೆ ಸೇರಿದ ಇವರು ಇಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಯೇನೆಕಲ್ಲು ಶಾಲೆಗೆ ವರ್ಗಾವಣೆ ಗೊಂಡು ಇಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಮುರುಳ್ಯ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಮಾ.ಹಿ.ಪ್ರಾ.ಶಾಲೆ ಪಂಜ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀ ಮಾಧವ ಪಿ
ಪ್ರಭಾರ ಮುಖ್ಯ ಶಿಕ್ಷಕರು.
ಸ.ಹಿ.ಪ್ರಾ.ಶಾಲೆ ಅಡ್ತಲೆ ಸುಳ್ಯ ತಾಲೂಕು.
ಸುಳ್ಯ ತಾಲೂಕು ಅರಂತೋಡು ಗ್ರಾಮದ ಪೂಜಾರಿ ಮನೆ ಶ್ರೀಯುತ ತಿಮ್ಮಪ್ಪ ಗೌಡ ಹಾಗೂ ಶ್ರೀಮತಿ ಲಕ್ಷ್ಮೀ ದಂಪತಿಗಳ ಪುತ್ರನಾಗಿ ದಿನಾಂಕ 01.06.1964 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಕಿ.ಪ್ರಾ.ಶಾಲೆ ಕಿರ್ಲಾಯ,ಸ.ಮಾ.ಹಿ.ಪ್ರಾ.ಶಾಲೆ ಅರಂತೋಡು ಇಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿ ಪೂರೈಸಿ,ಶಿಕ್ಷಕ ತರಬೇತಿಯನ್ನು ಕುಮುದಾ ಉಮಾ ಶಂಕರ ತರಬೇತಿ ಸಂಸ್ಥೆ ಕೊಕ್ಕರ್ಣೆ ಉಡುಪಿ ಇಲ್ಲಿ ಪೂರೈಸಿ, ದಿನಾಂಕ 07.08.1998 ರಲ್ಲಿ ಸ.ಹಿ.ಪ್ರಾ.ಶಾಲೆ ಪೈಲಾರು ಇಲ್ಲಿ ಸೇವೆಗೆ ಸೇರಿದ ಇವರು 6 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಕೇರ್ಪಳ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಸ.ಹಿ.ಪ್ರಾ.ಶಾಲೆ ಅಡ್ತಲೆ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಸುಶೀಲಾ ಕೆ
ಸ.ಹಿ.ಪ್ರಾ.ಶಾಲೆ ಕದಿಕಡ್ಕ
ಸುಳ್ಯ ತಾಲೂಕು
ಮಂಡೆಕೋಲು ಗ್ರಾಮದ ಮುರೂರು ಶಾಲೆಯಲ್ಲಿ ಸೇವೆಗೆ ಸೇರಿದ ಇವರು ಇಲ್ಲಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಹಿ.ಪ್ರಾ.ಶಾಲೆ ಕುಕ್ಕೆಟ್ಟಿ ಇಲ್ಲಿಗೆ ವರ್ಗಾವಣೆ ಗೊಂಡು ಇಲ್ಲಿ ಸೇವೆ ಸಲ್ಲಿಸಿ ನಂತರ ಮೈತಡ್ಕ ಹಾಗೂ ಇರುವಂಬಳ್ಳ ಶಾಲೆಯಲ್ಲಿ ನಿಯೋಜನೆಯಲ್ಲಿ ಸೇವೆ ಸಲ್ಲಿಸಿ ನಂತರ ಕದಿಕಡ್ಕ ಶಾಲೆಗೆ ವರ್ಗಾವಣೆ ಗೊಂಡು ಸೇವೆ ಸಲ್ಲಿಸಿದ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಸೇವೆಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೆ ಸಮಾಜಕ್ಕೆ ತಮ್ಮಿಂದ ಇನ್ನಷ್ಟು ಸೇವೆಗಳು ಲಭಿಸಲಿ. ದೇವರು ತಮಗೆ ಆಯುರಾರೋಗ್ಯ ಐಶ್ವರ್ಯ ನೆಮ್ಮದಿ ಕರುಣಿಸಲಿ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತಿದ್ದೇವೆ.